News Cafe | Outgoing President Ram Nath Kovind Addresses Nation On The Eve Of Demitting Office | HR Ranganath | July 25, 2022

2022-07-25 3

ದೇಶದ 15ನೇ ರಾಷ್ಟ್ರಪತಿ, ಪ್ರಥಮ ಪ್ರಜೆಯಾಗಿ ಇಂದು ಬೆಳಗ್ಗೆ 10.15ಕ್ಕೆ ದ್ರೌಪದಿ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಂಸತ್ ಸೆಂಟ್ರಲ್ ಹಾಲ್ ಸಾಕ್ಷಿಯಾಗಲಿದೆ. ಮುರ್ಮು ಅವರಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ವಿ ರಮಣ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಧಾನಿ ಮೋದಿ ಆದಿಯಾಗಿ ಸಚಿವರು, ಬಿಜೆಪಿಯ ಎಲ್ಲ ಸಂಸದರು ಇರಲಿದ್ದಾರೆ. ದ್ರೌಪದಿ ಮುರ್ಮು ಒಡಿಶಾದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದವರು, 20 ಜೂನ್ 1958 ಜನಿಸಿದ ಅವರು ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಮುರ್ಮು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿದ್ದು, ಸ್ವಾತಂತ್ರ್ಯೊತ್ತರ ಜನಿಸಿದ ವ್ಯಕ್ತಿಯೊಬ್ಬರು ರಾಷ್ಟ್ರಪತಿಯಾಗುತ್ತಿರುವುದು ಇದೇ ಮೊದಲು. ಇನ್ನು, ದ್ರೌಪದಿ ಮುರ್ಮು ಪದಗ್ರಹಣ ಹಿನ್ನೆಲೆಯಲ್ಲಿ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.

ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶ ಉದ್ದೇಶಿಸಿ ತಮ್ಮ ಕೊನೆ ಭಾಷಣದಲ್ಲಿ `ಪ್ರಕೃತಿ ಮಾತೆ ತೀವ್ರ ಸಂಕಟದಲ್ಲಿದ್ದು, ಹವಾಮಾನ ಬಿಕ್ಕಟ್ಟು ಭೂಮಿಯ ಭವಿಷ್ಯವನ್ನು ಅಪಾಯಕ್ಕೆ ದೂಡಬಹುದು ' ಅಂತ ಆತಂಕ ವ್ಯಕ್ತಪಡಿಸಿದ್ದಾರೆ. ದೇಶ ಸೇವೆ ಮಾಡೋದು ನನ್ನ ಬಾಲ್ಯದ ಕನಸು. ಇದಕ್ಕಾಗಿ ನಾನು ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಶಕ್ತಿಗೆ ವಂದಿಸುತ್ತೇನೆ. ನಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರುವುದು ಭಾರತೀಯ ಸಂಸ್ಕೃತಿಯ ವಿಶೇಷತೆ. ಯುವ ಪೀಳಿಗೆ ನಮ್ಮ ಸಂಸ್ಕøತಿಯನ್ನು ಬಿಟ್ಟುಕೊಡಬಾರದು. 'ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳು ಅಮೂರ್ತತೆಗಳಲ್ಲ, ಆದರೆ ಅತ್ಯುತ್ನತ, ಉದಾತ್ತ ಮತ್ತು ಉನ್ನತಿಗೇರಿಸುವಂತಿವೆ. ದೇಶವು 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದೆ. ನಾಯಕರ ಗ್ಯಾಲೆಕ್ಸಿಯನ್ನೇ ಹೊಂದಿರುವ ಭಾರತದಷ್ಟು ಅದೃಷ್ಟ ಬೇರೆ ಯಾವುದೇ ದೇಶಕ್ಕಿಲ್ಲ. 21ನೇ ಶತಮಾನವನ್ನು `ಭಾರತದ ಶತಮಾನ'ವನ್ನಾಗಿ ಮಾಡಲು ಸಜ್ಜಾಗುತ್ತಿದೆ ಎಂದು ನಾನು ದೃಢವಾಗಿ ನಂಬುತ್ತೇನೆ ಅಂತ ಕೋವಿಂದ್ ಹೇಳಿದ್ರು.

#publictv #hrranganath #newscafe